Wednesday, September 29, 2010

ಒಮ್ಮೆ ನಿನ್ನನ್ನು ಕಣ್ತುಂಬಾ ಕಾಣುವಾಸೆ

ಚಿತ್ರ: ಗಾಳಿ ಮಾತು
ಸಾಹಿತ್ಯ: ಚಿ.ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್.ಜಾನಕಿ
ವರ್ಷ: ೧೯೮೧
 
ಒಮ್ಮೆ ನಿನ್ನನ್ನು ಕಣ್ತುಂಬಾ ಕಾಣುವಾಸೆ ಎಲ್ಲಿರುವೇ
ಒಮ್ಮೆ ನಿನ್ನನ್ನು ಕಣ್ತುಂಬಾ ಕಾಣುವಾಸೆ ಎಲ್ಲಿರುವೇ
ಭುವಿಯಲ್ಲೋ ಬಾನಲ್ಲೋ ಇನ್ನೆಲ್ಲೋ ನಾ ಕಾಣೇ..
ಒಮ್ಮೆ ನಿನ್ನನ್ನು ಕಣ್ತುಂಬಾ ಕಾಣುವಾಸೆ ಎಲ್ಲಿರುವೇ

ಅರಳಿರುವ ಹೂವಿನಲ್ಲೀ ನಿನ್ನ ನೋಟವಾ
ಹರಿಯುತಿಹ ನೀರಿನಲ್ಲೀ ನಿನ್ನ ಓಟವಾ
ಇಂಪಾದ ಗಾನದಲ್ಲೀ ನಿನ್ನ ಮೊಗದ ಭಾವವಾ
ಮಳೆ ಬಿಲ್ಲ ಬಣ್ಣದಲ್ಲಿ ನಿನ್ನ ಅಂದವಾ
ನವಿಲಾಡೊ ನಾಟ್ಯದಲ್ಲೀ ನಿನ್ನ ಚಂದವಾ
ತಂಪಾದ ಗಾಳಿಯಲ್ಲೀ ನೀನಾಡೋ ಆಟವಾ
ದಿನವೆಲ್ಲಾ ನಾ ಕಂಡೇ ನಾ ಕಂಡು ಬೆರೆಗಾದೆ...

ಒಮ್ಮೆ ನಿನ್ನನ್ನು ಕಣ್ತುಂಬಾ ಕಾಣುವಾಸೆ ಎಲ್ಲಿರುವೇ...

ಮಿನುಗುತಿಹ ತಾರೆಯೆಲ್ಲಾ ನಿನ್ನ ಕಂಗಳೋ
ನಗುತಿರಲು ಭೂಮಿಗೆಲ್ಲಾ ಬೆಳದಿಂಗಳೋ
ಆ ಬೆಳ್ಳೀ ಮೋಡವೆಲ್ಲಾ ನೀ ಬರೆದ ಬೊಂಬೆಗಳೋ
ಮೂಡಣದ ಅಂಚಿನಿಂದಾ ನಿನ್ನ ಪಯಣವೋ
ಮುಂಜಾನೆ ಕಾಣೋ ಕೆಂಪು ಚಂದುಟಿಯ ಬಣ್ಣವೋ
ಆಗಸದ ನೀಲಿಯೆಲ್ಲಾ ನೀ ನಡೆವ ಹಾದಿಯೋ
ನಿನ್ನಂತೇ ಯಾರಿಲ್ಲಾ ನಿನ್ನಲ್ಲೇ ಮನಸೆಲ್ಲಾ...

ಒಮ್ಮೆ ನಿನ್ನನ್ನು ಕಣ್ತುಂಬಾ ಕಾಣುವಾಸೆ ಎಲ್ಲಿರುವೇ...
ಭುವಿಯಲ್ಲೋ ಬಾನಲ್ಲೋ ಇನ್ನೆಲ್ಲೋ ನಾ ಕಾಣೇ..
ಒಮ್ಮೆ ನಿನ್ನನ್ನು ಕಣ್ತುಂಬಾ ಕಾಣುವಾಸೆ ಎಲ್ಲಿರುವೇ

No comments: