Tuesday, November 16, 2010

ಕಾವೇರಿ ತೀರದಲ್ಲಿ ಒಂದು ಕಾಡು



ಚಿತ್ರ : ಜನ್ಮ ರಹಸ್ಯ
ಸಾಹಿತ್ಯ: ಎಂ. ನರೇಂದ್ರ ಬಾಬು
ಸಂಗೀತ: ಎಂ. ರಂಗರಾವ್
ಗಾಯಕರು: ಎಸ್. ಜಾನಕಿ
ವರ್ಷ: ೧೯೭೨

ಕಾವೇರಿ ತೀರದಲ್ಲಿ ಒಂದು ಕಾಡು
ಆ ಕಾಡೊಂದು ಮೃಗಗಳ ಬೀಡು
ಮೃಗರಾಜನಿಗೆ ಜನುಮ ದಿನ
ಅದು ಎಲ್ಲ ಪ್ರಾಣಿಗಳು ನಲಿವ ದಿನ

ಕಾವೇರಿ ತೀರದಲ್ಲಿ ಒಂದು ಕಾಡು
ಆ ಕಾಡೊಂದು ಮೃಗಗಳ ಬೀಡು
ಮೃಗರಾಜನಿಗೆ ಜನುಮ ದಿನ
ಅದು ಎಲ್ಲ ಪ್ರಾಣಿಗಳು ನಲಿವ ದಿನ

ಗಂಭೀರ ನಡೆ ಹಾಕಿ ಆನೆ ಬಂತು
ಸೊಂಡಿಲಲ್ಲಿ ಬಾಳೆ ಗೊನೆಯನು ತಂತು
ಡೊಂಕು ಹೆಜ್ಜೆ ಹಾಕುತ ಕರಡಿ ಬಂತು
ಡೊಂಕು ಹೆಜ್ಜೆ ಹಾಕುತ ಕರಡಿ ಬಂತು
ಹಲಸು ಜೇನು ಕಲೆಸುತ ತಾನು
ಹಲಸು ಜೇನು ಕಲೆಸುತ ತಾನು
ಕಾಣಿಕೆಯಾಗಿ ತಂತು

ಕಾವೇರಿ ತೀರದಲ್ಲಿ ಒಂದು ಕಾಡು
ಆ ಕಾಡೊಂದು ಮೃಗಗಳ ಬೀಡು
ಮೃಗರಾಜನಿಗೆ ಜನುಮ ದಿನ
ಅದು ಎಲ್ಲ ಪ್ರಾಣಿಗಳು ನಲಿವ ದಿನ

ಬಣ್ಣ ಬಣ್ಣದ ಗರಿಗಳ ತೆರೆದು
ನವಿಲು ಕುಣಿಯಿತು ಆಡಿ
ಬಣ್ಣ ಬಣ್ಣದ ಗರಿಗಳ ತೆರೆದು
ನವಿಲು ಕುಣಿಯಿತು ಆಡಿ
ರಾಜನ ನೋಡಿ ಹರುಷದಿ ಕೂಡಿ
ರಾಜನ ನೋಡಿ ಹರುಷದಿ ಕೂಡಿ
ಕೋಗಿಲೆ ಮೆರೆಯಿತು ಹಾಡಿ
ಹಾಡನು ಕೇಳಿ ಸ್ಫೂರ್ತಿಯ ತಾಳಿ
ಹಾಡನು ಕೇಳಿ ಸ್ಫೂರ್ತಿಯ ತಾಳಿ
ಕತ್ತೆಯು ಹಾಡಿತು ಜೊತೆಗೂಡಿ

ಕಾವೇರಿ ತೀರದಲ್ಲಿ ಒಂದು ಕಾಡು
ಆ ಕಾಡೊಂದು ಮೃಗಗಳ ಬೀಡು
ಮೃಗರಾಜನಿಗೆ ಜನುಮ ದಿನ
ಅದು ಎಲ್ಲ ಪ್ರಾಣಿಗಳು ನಲಿವ ದಿನ

ಆಡೋಣ ಬನ್ನಿ ಆಡೋಣ ಬನ್ನಿ ಅಪ್ಪಾಲೆ ತಿಪ್ಪಾಲೆ
ಹಾಕೋಣ ಬನ್ನಿ ಹಾಕೋಣ ಬನ್ನಿ ರಾಜಾಗೆ ಹೂಮಾಲೆ

ಕೋರುವೆವಿಂದು ದೇವರು ನಿನ್ನ ಸುಖವಾಗಿಡಲೆನುತ
ನ್ಯಾಯವ ನುಡಿದು ಕೀರುತಿ ಪಡೆದು ಬಾಳಲಿ ಎಂದೆನುತ
ನಗುನಗುತ ನಲಿನಲಿತ ಗೆಳೆಯರಿಗೆ ಸೈಎನುತ
ಸಾವಿರ ವರುಷ ಗೆಲ್ಲುತ ಹರುಷ ನೀನಿರು ಅನವರತ

No comments: